MiniPlayer

ಪ್ರಸ್ತುತವಾಗಿ ಏನು ಪ್ಲೇ ಆಗುತ್ತಿದೆ ಎಂಬುದನ್ನು ತೋರಿಸುವ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಫ್ಲೋಟಿಂಗ್ ಕಂಟ್ರೋಲ್‌ಗಳು. ಆ್ಯಪ್‌ ಅನ್ನು ಅವಲಂಬಿಸಿ, ಆಡಿಯೊವನ್ನು ಪ್ಲೇ ಮಾಡಲು ಅಥವಾ ವಿರಾಮಗೊಳಿಸಲು, ಮುಂದಿನ ಟ್ರ್ಯಾಕ್‌ಗೆ ಸ್ಕಿಪ್ ಮಾಡಲು, 15 ಸೆಕೆಂಡ್ ಹಿಂದಕ್ಕೆ ಹೋಗಲು ಅಥವಾ 30 ಸೆಕೆಂಡ್ ಮುಂದಕ್ಕೆ ಹೋಗಲು ನೀವು MiniPlayer ಅನ್ನು ಬಳಸಬಹುದು. ಈಗ ಪ್ಲೇ ಆಗುತ್ತಿರುವ ಸ್ಕ್ರೀನ್ ಅನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ.

ಲೈಬ್ರರಿ ಸ್ಕ್ರೀನ್‌ನ ಕೆಳಭಾಗದಲ್ಲಿ MiniPlayer ಅನ್ನು ತೋರಿಸುತ್ತದೆ. MiniPlayer, ಪ್ಲೇ ಆಗುತ್ತಿರುವ ಹಾಡಿನ ಶೀರ್ಷಿಕೆಯನ್ನು ತೋರಿಸುತ್ತದೆ. ವಿರಾಮಗೊಳಿಸಿ ಮತ್ತು ಮುಂದಿನ ಟ್ರ್ಯಾಕ್ ಬಟನ್‌ಗಳು ಹಾಡಿನ ಶೀರ್ಷಿಕೆಯ ಬಲಭಾಗದಲ್ಲಿವೆ. ಈಗ ಪ್ಲೇ ಆಗುತ್ತಿರುವ ಸ್ಕ್ರೀನ್ ಅನ್ನು ತೆರೆಯಲು MiniPlayer ಅನ್ನು ಟ್ಯಾಪ್ ಮಾಡಿ.